ಬುಧವಾರ, ಮಾರ್ಚ್ 17, 2010

ಬಾನಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಂದು ಕೊನೆ ಇದೆ... ....... ........ .....

ಯಾವಾಗಾದ್ರೂ ಜೀವನದಲ್ಲಿ ಚಿಗುಪ್ಸೆ ಬಂದಾಗ, ಎಂದಾದರೂ ನಿರಾಸೆ ಆದಾಗ, ಅನ್ಕೊಂಡಿದ್ದು ಆಗದೆ ಹೋದಾಗ ಒಂದ ಸಲ ಈ ಹಾಡನ್ನ ಕೇಳಿಬಿಡಿ. ಒಂದಲ್ಲ, ಇನ್ನೂ ಹೆಚ್ಹು ಹೆಚ್ಹು ನೀವೇ ಕೇಳ್ತಿರಿ. ತುಂಬಾ ಅರ್ಥಪೂರ್ಣವಾದ ಹಾಡಿದು.


ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೆ ಕನಸು ಕಾಣುವೆ ನಿಧಾನಿಸು ನಿಧಾನಿಸು

ಆಸೆಯೆಂಬ ಬಿಸಿಲು ಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ....

ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು

ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ ಅದೇನೇ ಬಂದರು ಅವನ ಕಾಣಿಕೆ......



ಅವನು ಈ ನಿಯಮವನ್ನ ನಮಗೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅರ್ಥ ಮಾಡಸ್ತಾ ಇರ್ತಾನೆ. ನಾವು ಅರ್ಥ ಮಾಡ್ಕೊಳ್ಳೋವರೆಗೂ ಬಿಡಲ್ಲ. ಈ ಮನುಷ್ಯ ಅಷ್ಟು ಬೇಗ ಅರ್ಥ ಮಾಡ್ಕೊಳಲ್ಲ. ಅರ್ಥ ಮಾಡ್ಕೊಳ್ಳೋ ಹೊತ್ತಿಗೆ, ಬಾಳಿನ ಆ ಎರಡನೇ ಕೊನೆ ಸ್ಪಷ್ಟವಾಗ್ತಿರತ್ತೆ ಅನ್ಸತ್ತೆ. ಏನಂತೀರ..?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ